ಈ ಕೊರತೆಯನ್ನು ಕೊಂಚಮಟ್ಟಿಗಾದರೂ ಕಡಿಮೆಮಾಡುವ ದೃಷ್ಟಿಯಿಂದ 'ಕಂಪ್ಯೂಟರ್ ಮತ್ತು ಕನ್ನಡ' ಎನ್ನುವ ಕೃತಿ ಇದೀಗ ಹೊರಬಂದಿದೆ. ಪದವಿ ವಿದ್ಯಾರ್ಥಿಗಳು ಮತ್ತು ಕಂಪ್ಯೂಟರಿನಲ್ಲಿ ಕನ್ನಡ ಬಳಸುವ ಆಸಕ್ತಿಯಿರುವವರನ್ನು ಉದ್ದೇಶಿಸಿ ಹೊರತರಲಾಗಿರುವ ಈ ಕೃತಿ 'ಉಚಿತ ಪುಸ್ತಕ ಸಂಸ್ಕೃತಿ'ಯ ಅಂಗವಾಗಿ ಬಿಡುಗಡೆಯಾಗಿದೆ. ಅಂದರೆ, ಈ ಪುಸ್ತಕವನ್ನು ಯಾರು ಬೇಕಿದ್ದರೂ ಉಚಿತವಾಗಿ ಪಡೆದುಕೊಳ್ಳುವುದು, ಹಂಚಿಕೊಳ್ಳುವುದು ಸಾಧ್ಯ. ಉಪಯುಕ್ತ ಮಾಹಿತಿಯ ಪ್ರಸಾರಕ್ಕೆ ಯಾವುದೇ ಅಡೆತಡೆಗಳಿರಬಾರದೆಂಬ ಉದ್ದೇಶದಿಂದ ಈ ಪುಸ್ತಕವನ್ನು ಉಚಿತವಾಗಿ ನೀಡಲಾಗುತ್ತಿದೆ. ಅಷ್ಟೇ ಅಲ್ಲ, ಇದೀಗ ಇಜ್ಞಾನ ಶಿಕ್ಷಣ ಮಿತ್ರ ಇದನ್ನು ಅಂತರಜಾಲದಲ್ಲೂ ಮುಕ್ತವಾಗಿ ಪ್ರಕಟಿಸಿದೆ.
ಈ ಪುಸ್ತಕವನ್ನು ಕ್ರಿಯೇಟಿವ್ ಕಾಮನ್ಸ್ Attribution-NonCommercial-NoDerivatives 4.0 International (CC BY-NC-ND 4.0) ಲೈಸೆನ್ಸ್ನಡಿ ವಿತರಿಸಲಾಗುತ್ತಿದೆ | ಹೆಚ್ಚಿನ ವಿವರ
ಮಿತ್ರಮಾಧ್ಯಮ ಹಾಗೂ ಸುರಾನಾ ಕಾಲೇಜುಗಳ ಸಹಯೋಗದಲ್ಲಿ ಪ್ರಕಟವಾಗಿರುವ ಈ ಪುಸ್ತಕದ ಆಶಯ ನುಡಿಗಳನ್ನು ಇಲ್ಲಿ ಓದಬಹುದು: "ಕನ್ನಡವೂ ಬೆಳೆಯಲಿ, ಪುಸ್ತಕ ಸಂಸ್ಕೃತಿ ವಿಸ್ತರಿಸಲಿ"
ಈ ಪುಸ್ತಕದಲ್ಲಿರುವ ಅಧ್ಯಾಯಗಳು ಹೀಗಿವೆ. ಕೆಳಗಿನ ಕೊಂಡಿಗಳ ಮೇಲೆ ಕ್ಲಿಕ್ ಮಾಡಿದಾಗ ಅಧ್ಯಾಯಗಳು ಹೊಸ ಪುಟಗಳಲ್ಲಿ ತೆರೆದುಕೊಳ್ಳುತ್ತವೆ.
- ಕಂಪ್ಯೂಟರಿನಲ್ಲಿ ಕನ್ನಡದ ಬಳಕೆ | ಡಾ. ಎ.ಸತ್ಯನಾರಾಯಣ
- ಕನ್ನಡ ಮತ್ತು ಡಿಟಿಪಿ | ಬೇಳೂರು ಸುದರ್ಶನ
- ಅಂತರಜಾಲ ಮತ್ತು ಕನ್ನಡ | ಟಿ.ಜಿ.ಶ್ರೀನಿಧಿ
- ಮುಕ್ತ/ಸ್ವತಂತ್ರ ತಂತ್ರಾಂಶ ಚಳುವಳಿ | ಓಂಶಿವಪ್ರಕಾಶ್ ಎಚ್.ಎಲ್
- ಯುನಿಕೋಡ್ : ಏಕೆ? ಹೇಗೆ? | ಡಾ. ಯು.ಬಿ.ಪವನಜ
ಇಲ್ಲಿರುವ ಮಾಹಿತಿಯನ್ನು ಇ-ಬುಕ್ ರೂಪದಲ್ಲಿ ಓದಲು, ಹಾಗೂ ಡೌನ್ಲೋಡ್ ಮಾಡಿಕೊಳ್ಳಲು ಇಲ್ಲಿ ಕ್ಲಿಕ್ ಮಾಡಿ.
ಮುದ್ರಿತ ಪ್ರತಿಗಳನ್ನು ಪಡೆದುಕೊಳ್ಳಲು, ಹಾಗೂ ಉಚಿತ ಪುಸ್ತಕ ಸಂಸ್ಕೃತಿಯ ಬಗ್ಗೆ ಹೆಚ್ಚಿನ ವಿವರಗಳನ್ನು ತಿಳಿದುಕೊಳ್ಳಲು ಈ ಜಾಲತಾಣಕ್ಕೆ ಭೇಟಿಕೊಡಿ.